ಕ್ರೀಡಾ ಸಮಾಲೋಚನೆ
“ಕೆಲವೊಮ್ಮೆ ನಮ್ಮ ದೌರ್ಬಲ್ಯಗಳನ್ನು ತೋರಿಸುವುದಕ್ಕಲ್ಲದೇ ನಮ್ಮ ಶಕ್ತಿ-ಸಾಮರ್ಥ್ಯಗಳು ನಮಗೆ ತಿಳಿಯುವ ಸಲುವಾಗಿ ನಮ್ಮನ್ನು ಪರೀಕ್ಷಿಸಲಾಗುತ್ತದೆ.” – Success.com
ಯಾವುದೇ ವ್ಯಕ್ತಿಯು ಪ್ರತಿಕೂಲ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ಹಾಗೂ ಯಾವುದೇ ರಂಗದಲ್ಲಿ ಸಮರ್ಪಕವಾದ ಸಾಧನೆ ತೋರಿಸಲು ದೃಢವಾದ ಮನಸ್ಸು ಮತ್ತು ಬಲವಾದ ಬುದ್ಧಿಶಕ್ತಿಯನ್ನು ಹೊಂದಿರಬೇಕಾಗುತ್ತದೆ. ಎಸ್‌ಸಿಎಸ್‌ನಲ್ಲಿ (SCS) ನಾವು ಕ್ರೀಡಾಪಟುಗಳ ಮಾನಸಿಕ ಸುಸ್ಥಿತಿಗೆ ಕಾರಣವಾಗುವ ಮೂಲಭೂತ ಅಂಶಗಳನ್ನು ನಮ್ಮವೃತ್ತಿಪರರೊಂದಿಗೆ ವ್ಯಾಪಕವಾದ ಸಂವಾದಗಳನ್ನು ನಡೆಸುವ ಮೂಲಕ ಅರಿಯಲು ಹಾಗೂ ವಿಶ್ಲೇಷಿಸಲು ಪ್ರೋತ್ಸಾಹಿಸುತ್ತೇವೆ. ಯಾವುದೇ ಒತ್ತಡವನ್ನು ಉಂಟುಮಾಡುವ ಅಂಶಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದರಿಂದ ಸಹಾಯವಾಗುವುದೆಂದು ನಾವು ಕಂಡುಕೊಂಡಿದ್ದೇವೆ.
ಪ್ರತಿಯೊಂದು ಅಭ್ಯಾಸ ಮತ್ತು ಸ್ಪರ್ಧೆಯು ವ್ಯಕ್ತಿಯೊಬ್ಬನು ಆಲೋಚಿಸುವ ವಿಧಾನದಿಂದ ಆರಂಭವಾಗುತ್ತದೆ ಎಂಬುದು ನಮ್ಮ ಪ್ರಮುಖ ನಂಬಿಕೆಯಾಗಿದೆ, ಕ್ರೀಡಾಪಟುಗಳು ತಮ್ಮ ಕ್ರೀಡೆಯಲ್ಲಿ ಉತ್ಪಾದಕರಾಗುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು “ವ್ಯಕ್ತಿಯಬ್ಬನು/ಳು ತನ್ನ ಸಾಮರ್ಥ್ಯಗಳನ್ನು ಅರಿಯುವಲ್ಲಿ, ಜೀವನದ ದೈನಂದಿನ ಒತ್ತಡಗಳನ್ನು ನಿಭಾಯಿಸುವಲ್ಲಿ, ಉತ್ಪಾದಕವಾಗಿ ಕೆಲಸ ಮಾಡುವಲ್ಲಿ, ಹಾಗೂ ಅವನ/ಳ ಸಮುದಾಯಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ಯಶಸ್ಸನ್ನು ಕಾಣುವ ಸುಸ್ಥಿತಿಯೇ ಮಾನಸಿಕ ಆರೋಗ್ಯ” ಎಂದು ವ್ಯಾಖ್ಯಾನಿಸಿದೆ.
ವಿಷಮ ಪರಿಸ್ಥಿತಿಗಳನ್ನು ಗುರುತಿಸುವುದು

ವೃತ್ತಿಪರ ಕ್ರೀಡಾಪಟುಗಳು ಕೇವಲ ಮೈದಾನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಮಾತ್ರವಲ್ಲದೇ ಅವರು ವಿವಿಧ ಸಾಮಾಜಿಕ, ವೈಯಕ್ತಿಕ, ಮತ್ತು ಔದ್ಯೋಗಿಕ ವಲಯಗಳಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುವ ಮತ್ತು ಅವು ಹೇಗೆ ಅವರ ಮಾನಸಿಕ ಒತ್ತಡ, ಉದ್ವೇಗ, ಹಾಗೂ ಖಿನ್ನತೆಗಳಿಗೆ ಕಾರಣಗಳಾಗಬಹುದೆಂಬ ಅಧ್ಯಯನ ಮಾಡುವ ಸತತ ಪ್ರಯತ್ನಗಳನ್ನು ನಾವು ಎಸ್‌ಸಿಎಸ್‌ನಲ್ಲಿ ನಡೆಸುತ್ತಿದ್ದೇವೆ.
ಪ್ರತಿ ವರ್ಷ ಕನಿಷ್ಠ ಐದು ಮಂದಿ ವಯಸ್ಕರಲ್ಲಿ ಒಬ್ಬರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ಅಂದಾಜು ಮಾಡಿವೆ.
ಸಾಧನೆ ಮತ್ತು ದೈಹಿಕ ಸಾಮರ್ಥ್ಯದಗಳ ವಿಷಯದಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ಪ್ರಯತ್ನದಲ್ಲಿ, ಒಬ್ಬ ಕ್ರೀಡಾಪಟುವು ತನ್ನ ಪರಿಶ್ರಮದ ಮಿತಿಗಳನ್ನು ಹೆಚ್ಚಿಸಿಕೊಳ್ಳುವ ಒತ್ತಡಕ್ಕೆ ಒಳಗಾಗುತ್ತಾನೆ. ಈ ವಿಚಾರವು ಆಟಗಾರರಲ್ಲಿ ಉತ್ಸಾಹವನ್ನು ಖಚಿತಪಡಿಸುತ್ತದೆ, ಹಾಗೂ ಇತರ ಸಮಯಗಳಲ್ಲಿ ಇದು ಅಂತಹ ಮೇಲ್ಮಟ್ಟಗಳನ್ನು ತಲುಪುವ ಅತೀವ ಒತ್ತಡವು ಕ್ರೀಡಾಪಟುವಿಗೆ ಆ ಹೋರಾಟದಲ್ಲಿ ಸೋತ ಅನುಭವನ್ನು ನೀಡುತ್ತದೆ.
ನಾನು ಕಠಿಣವಾಗಿದ್ದೇನೆಂಬ ನಂಬಿಕೆಯು ಸಾಮಾನ್ಯವಾಗಿ ಹೆಚ್ಚಿನ ವೇಳೆಗಳಲ್ಲಿ ನಮ್ಮ ದೌರ್ಬಲ್ಯದ ಚಿಹ್ನೆಗಳ ನಿರಾಕರಣೆಯಾಗಿ ಬದಲಾಗುತ್ತದೆ. ಹಾಗೂ, ನಾನೂ ಸಹ ದೈಹಿಕ ಅಸಾಮರ್ಥ್ಯಕ್ಕೆ ಈಡಾಗುವ ಸಾಧ್ಯತೆಗಳನ್ನು ಹೊಂದಿದ್ದೇನೆ ಎನ್ನುವುದನ್ನು ಒಪ್ಪದೇ ಎಲ್ಲಾ ಸಮಯಗಳಲ್ಲೂ ನಾನು ಸಮರ್ಥನಾಗಿದ್ದೇನೆ ಎನ್ನುವ ತೋರಿಕೆಯ ಭಾವನೆಗೆ ದಾರಿ ಮಾಡಿಕೊಡುತ್ತವೆ. ಇವೆಲ್ಲವೂ ಉತ್ತಮ ಸಾಧನೆಯ ತೀವ್ರ ಒತ್ತಡದೊಂದಿಗೆ ಸೇರಿದಾಗ ದುರಂತ ಪರಿಣಾಮಗಳಿಗೆ ಕಾರಣವಾಗಬಹುದು.
ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ಸಾಧಿಸುವ ಅವಶ್ಯಕತೆ, ಜೀವನಶೈಲಿ, ಮತ್ತು ಇತರ ಜೈವಿಕ ಅಂಶಗಳಂತಹ ಬಾಹ್ಯ ಅಂಶಗಳು ವ್ಯಕ್ತಿಯ ಭಾವನೆಗಳು ಮತ್ತು ಆಯ್ಕೆಗಳ ಮೇಲೆ ಪ್ರಭಾವ ಬೀರುವ ಮೂಲಕ ಒಟ್ಟಾರೆ ಸಾಧನೆಯ ಮೇಲೆ ಪರಿಣಾಮ ಬೀರಬಹುದು.
ವ್ಯಕ್ತಿಯೊಬ್ಬನು ಗರಿಷ್ಠ ದೈಹಿಕ ಆರೋಗ್ಯ ಹೊಂದಿರಲು ಮತ್ತು ಅತ್ಯುತ್ತಮ ಸಾಧನೆ ಮಾಡುವ ಸಾಮರ್ಥ್ಯ ಹೊಂದಿರಲು ಪ್ರಶಸ್ತವಾದ ಮಾನಸಿಕ ಆರೋಗ್ಯ ಅತ್ಯವಶ್ಯಕವೆಂದು ಅಧ್ಯಯನಗಳು ತೋರಿಸಿವೆ. ಇದನ್ನು ಸಾಧಿಸಲು, ವ್ಯಕ್ತಿಯೊಬ್ಬನ ವೈಯಕ್ತಿಕ ಮತ್ತು ವೃತ್ತಿಪರ ಜವಾಬ್ದಾರಿಗಳು, ಸಾಮಾಜಿಕ ಜೀವನ, ಮತ್ತು ದೈನಂದಿನ ಚಟುವಟಿಕೆಗಳ ನಡುವೆ ಸಮತೋಲನವನ್ನು ಹೊಂದಿರುವುದು ಅತ್ಯಗತ್ಯವಾಗಿದೆ.
ಸಹಾಯ ಕೋರುವುದು ಶಕ್ತಿ ಮತ್ತು ದೃಢತೆಯ ಮೊದಲ ಚಿಹ್ನೆ ಎಂಬ ನಂಬಿಕೆಯನ್ನು ನಾವು ಪ್ರೇರೇಪಿಸುತ್ತೇವೆ. ಅತ್ಯಂತ ಅನುಭವಿ ಮತ್ತು ಕಠಿಣ ಮನೋಭಾವವನ್ನು ಹೊಂದಿರುವ ಕ್ರೀಡಾಪಟುಗಳೂ ಸಹ ಸೋಲು-ಗೆಲುವುಗಳು ಹಾಗೂ ಸತತ ಪ್ರಯತ್ನಗಳ ಮೂಲಕವೇ ಸಾಗಿ ಬಂದು ಇಂದು ಅಗ್ರಗಣ್ಯ ಕ್ರೀಡಾಪಟುಗಳಾಗಿದ್ದಾರೆ.
ನಮ್ಮ ಗುರಿ
ಮಾನಸಿಕ ಆರೋಗ್ಯದ ಅರಿವಿನ ಅವಶ್ಯಕತೆ
ಮಾನಸಿಕ ಆರೋಗ್ಯದ ಸುಸ್ಥಿತಿಗೆ ಸಂಬಂಧಿಸಿದ ಯಾವುದೇ ಚಿಂತೆ-ಆತಂಕಗಳ ಕಡೆ ಗಮನ ಹರಿಸುವುದು ಮತ್ತು ಅದಕ್ಕೆ ಕಾರಣವಾಗುವ ಸಂಭವನೀಯ ಅಂಶಗಳನ್ನು ವಿಶ್ಲೇಷಿಸುವುದು ನಮ್ಮ ತಂಡದ ಪ್ರಮುಖ ಉದ್ದೇಶವಾಗಿದೆ, ಆದರೆ ಸಮಸ್ಯೆಗಳ ತೀವ್ರತೆಯನ್ನು ತಗ್ಗಿಸಲು ಪ್ರಾಯೋಗಿಕ ವಿಧಾನವನ್ನು ಅನುಸರಿಸಲಾಗುವುದು.
ಕ್ರೀಡಾಪಟುಗಳು ಮತ್ತು ಅಥ್ಲೇಟ್ಗಳ ನಡುವೆ ವೃತ್ತಿಪರ ಮತ್ಯ ವೈಯಕ್ತಿಕ ವಲಯಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ದರ ಏರುತ್ತಿರುವುದನ್ನು ಹೆಚ್ಚುತ್ತಿರುವ ಸಾಕ್ಷ್ಯಗಳು ಸೂಚಿಸುತ್ತಿವೆ. ಈ ಕೆಳಕಂಡ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ನಾವು ಸಮಗ್ರ ಚೌಕಟ್ಟನ್ನು ಪ್ರಸ್ತಾಪಿಸುತ್ತೇವೆ,
- ಖಿನ್ನತೆ
- ಉದ್ವೇಗ
- ಒತ್ತಡ
- ಆತ್ಮವಿಶ್ವಾಸದ ಕೊರತೆ
- ಅಸಮರ್ಪಕ ಸ್ವಯಂನಂಬಿಕೆ
- ಭಯ ಮತ್ತು ಸ್ವಯಂಅನುಮಾನ
- ಏಕಾಗ್ರತೆಯ ಕೊರತೆ
- ಅತಿಯಾದ ಚಿಂತನೆ
- ಒತ್ತಡವನ್ನು ನಿಭಾಯಿಸುವುದು
- ಸಾಧಿಸುವ ಒತ್ತಡ
- ಸಾಧನೆಗೆ ಸಂಬಂಧಿಸಿದ ಒತ್ತಡವನ್ನು ನಿಭಾಯಿಸುವುದು
- ಮಾನಸಿಕ ನಿರ್ಬಂಧಗಳು
- ವೈಫಲ್ಯಗಳನ್ನು ನಿಭಾಯಿಸುವುದು
- ಇತರರೊಂದಿಗೆ ಹೋಲಿಸಿಕೊಳ್ಳುವುದು

ಕ್ರಮದ ಭಾಗವಾಗಿ, ನಮ್ಮ ಗ್ರಾಹಕರ ಭಾವನಾತ್ಮಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಮಾಜಿಕ, ಮಾನಸಿಕ, ಮತ್ತು ಮನೋವೈಜ್ಞಾನಿಕ ಅಂಶಗಳ ನಿರ್ವಹಣೆಯ ಮೇಲೆ ಗಮನವಿಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಿರುವ ಕಾರ್ಯಕ್ರಮಗಳ ಮೂಲಕ ನಾವು ಮಾರ್ಗದರ್ಶನವನ್ನು ನೀಡುತ್ತೇವೆ.
ವ್ಯಕ್ತಿಯೊಬ್ಬನನ್ನು ಮೌನ ಹಾಗೂ ಏಕಾಂತತೆಗೆ ತಳ್ಳುವ ಅವನ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುವ ಕಳಂಕವನ್ನು ನಿವಾರಿಸಲು ಪ್ರಯತ್ನಿಸುವ ಮೂಲಕ ಅವನಲ್ಲಿ ಮಾನಸಿಕ ಹಾಗೂ ಭಾವನಾತ್ಮಕ ಸುಸ್ಥಿತಿಯನ್ನು ನಿರ್ಮಿಸಿ ಅವನು ತನ್ನ ಸಂಪೂರ್ಣ ಸಾಮರ್ಥ್ಯದ ಮಟ್ಟವನ್ನು ಮುಟ್ಟಲು ಅವನನ್ನು ಪ್ರೋತ್ಸಾಹಿಸುವುದೇ ನಮ್ಮ ಉದ್ದೇಶವಾಗಿದೆ
ನಾವು ನಮ್ಮ ಗ್ರಾಹಕರ ಕಡೆಗೆ ಸಹಾನುಭೂತಿಯನ್ನು ಹೊಂದಿ ಅವರು ತಮ್ಮ ಹೋರಾಟಗಳು ಮತ್ತು ಆಘಾತಗಳನ್ನು ಪರಿಹರಿಸಿಕೊಳ್ಳುವ ಪ್ರಯತ್ನದಲ್ಲಿ ಅವುಗಳ ಬಗ್ಗೆ ಯಾವುದೇ ಅಪರಾಧಿ ಮನೋಭಾವವನ್ನು ಹೊಂದಿರದಂತೆ ಅವರನ್ನು ಪ್ರೋತ್ಸಾಹಿಸುತ್ತೇವೆ.

ಕ್ರೀಡಾ ಸಮಾಲೋಚನೆಯ ಪ್ರಾಮುಖ್ಯತೆ
ಹೇಗೆ ಸವೆತ ಮತ್ತು ಹರಿಯುವಿಕೆಯ ನಂತರ ನಮ್ಮ ದೇಹವನ್ನು ಗುಣಪಡಿಸಲು ಸಮಯ ಬೇಕಾಗುವುದೋ, ಹಾಗೆಯೇ ನಮ್ಮ ಮನಸ್ಸಿಗೂ ವಿವಿಧ ರಂಗಗಳಿಂದ ಬರುವ ತೀವ್ರ ಒತ್ತಡದಿಂದ ಗುಣವಾಗಲು ಬಿಡುವಿನ ಕ್ಷಣಗಳು ಬೇಕಾಗುತ್ತವೆ. ವೃತ್ತಿಪರ ಕ್ರೀಡಾಪಟುಗಳನ್ನು ಅರ್ಥಮಾಡಿಕೊಂಡು ಹಾಗೂ ಅವರ ಚಿಂತೆಗಳನ್ನು ಅವರ ಆದ್ಯತೆಗಳ ಆಧಾರದಲ್ಲಿ ಹಾಗೂ ವಿವಿಧ ಹಂತದ ವೈಯಕ್ತಿಕ ಮತ್ತು ವೃತ್ತಿಪರ ರಂಗಗಳಲ್ಲಿ ವಿಶ್ಲೇಷಿಸುವ ಮೂಲಕ ಕ್ರೀಡಾಪಟುಗಳೊಂದಿಗೆ ಕೆಲಸ ಮಾಡುವುದು, ಅವರ ಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರುವ ಅವರ ಕಾಳಜಿಯನ್ನು ಅರ್ಥಮಾಡಿಕೊಳ್ಳುವುದು, ಆದ್ಯತೆ ನೀಡುವುದು ಮತ್ತು ವಿಶ್ಲೇಷಿಸುವುದು.
ಅತ್ಯುತ್ತಮ ದೈಹಿಕ ಸಾಮರ್ಥ್ಯವನ್ನು ಹೊಂದಿ ಉತ್ತಮ ಆಟಗಾರರೂ ಆಗಿರುವುದರ ಜೊತೆಗೆ ಭಾವನಾತ್ಮಕವಾಗಿಯೂ ಪ್ರಬುದ್ಧರಾಗಿದ್ದು ಶೈಕ್ಷಣಿಕವಾಗಿಯೂ ಸ್ಪರ್ಧಾತ್ಮಕವಾಗಿ ಉನ್ನತ ಮಟ್ಟವನ್ನು ಕಾಯ್ದುಕೊಳ್ಳಬಲ್ಲ ವಿದ್ಯಾರ್ಥಿ-ಕ್ರೀಡಾಪಟುಗಳು ಪ್ರತಿಷ್ಠಿತ ಕಾಲೇಜುಗಳು ಮತ್ತು ಸಂಸ್ಥೆಗಳಿಂದ ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದಾರೆ.
ಒತ್ತಡದಲ್ಲಿರುವಾಗ ಕ್ರೀಡಾಪಟುಗಳಿಗೆ ತಮ್ಮ ಭಾವನೆಗಳನ್ನು ನಿರ್ವಹಿಸುವ, ಸಮಸ್ಯೆಗಳಿಗೆ ಸರಿಯಾಗಿ ಪ್ರತಿಕ್ರಿಯಿಸಿ ಅವುಗಳನ್ನು ಗೆಲ್ಲುವ, ಮತ್ತು ನಿರ್ಧಾರ ಕೈಗೊಳ್ಳುವ ವಿಷಯದಲ್ಲಿ ಸ್ವಂತಿಕೆಯ ಭಾವನೆಯನ್ನು ನಿರ್ಮಿಸಿಕೊಂಡು ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ತಂತ್ರಗಳನ್ನು ಚಿಕಿತ್ಸಕನ ಮಧ್ಯಸ್ಥಿಕೆಯು ಒದಗಿಸುತ್ತದೆ.
SCS ನಲ್ಲಿ ತಜ್ಞರಿಂದ ವಿನ್ಯಾಸಗೊಳಿಸಲ್ಪಟ್ಟಿರುವ ಕಾರ್ಯಕ್ರಮಗಳು ಕ್ರೀಡಾಪಟುಗಳಿಗೆ ತಮ್ಮ ಗುರಿಗಳ ಮಾರ್ಗವನ್ನು ಗೊತ್ತುಪಡಿಸಿಕೊಂಡು, ಗಮನವನ್ನು ಕೇಂದ್ರೀಕರಿಸಿ, ಮುಂದಿನ ಹಂತಕ್ಕೆ ಸಿದ್ಧಗೊಳ್ಳಲು ಸಹಾಯ ಮಾಡುತ್ತವೆ
SCS ಕ್ರೀಡಾ ಆಪ್ತಸಲಹೆಯು ಕ್ರೀಡಾಪಟುಗಳಿಗೆ ಹೇಗೆ ಲಾಭದಾಯಕವಾಗಿದೆ?
- ಮೈದಾನದ ಒಳಗೆ ಮತ್ತು ಹೊರಗೆ ಸವಾಲುಗಳನ್ನು ಎದುರಿಸಲು ಕ್ರೀಡಾಪಟುಗಳ ಮನೋವೈಜ್ಞಾನಿಕ, ಭಾವನಾತ್ಮಕ, ಮಾನಸಿಕ ಸುಸ್ಥಿತಿಯನ್ನು ಹೆಚ್ಚಿಸಲೆಂದೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ವಿಧಾನಗಳ ಮೇಲೆ ಗಮನ ಕೇಂದ್ರೀಕರಿಸುವುದು.
- ಮೈದಾನದ ಒಳಗೆ ಮತ್ತು ಹೊರಗೆ ಆಟಗಾರರ ನಡವಳಿಕೆ ಮತ್ತು ಸಾಧನೆಗಳ ಮೇಲೆ ಪ್ರಭಾವ ಬೀರುವ ಮನೋವೈಜ್ಞಾನಿಕ ಮತ್ತು ಸಾಮಾಜಿಕ ಪ್ರಚೋದಕಗಳನ್ನು ಗುರುತಿಸುವುದು ಮತ್ತು ಪರಿಶೀಲಿಸುವುದು.
- ಪರಿಹರಿಸಲಿಕ್ಕಾಗಿ ಯಾವುದೇ ಸಮಸ್ಯೆಯನ್ನು ಕೈಗೆತ್ತಿಕೊಂಡಾಗ ವಿಮರ್ಶಾತ್ಮಕವಲ್ಲದ ಮತ್ತು ಗೌಪ್ಯವಾದ ವ್ಯವಸ್ಥೆಯನ್ನು ಒದಗಿಸುವುದು.
- ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕ್ರಮದ ಭಾಗವಾಗಿ ಸಕಾರಾತ್ಮಕ ಆತ್ಮವಿಮರ್ಶೆಯನ್ನು ಪ್ರೋತ್ಸಾಹಿಸುವಾಗ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಪ್ರಾಮಾಣಿಕವಾದ ಹಾಗೂ ನೇರ ಸಂವಹನದ ಅವಧಿಗಳನ್ನು ನಡೆಸುವುದು.
- ಹಿನ್ನಡೆಗಳು, ಗಾಯಗಳು, ಮತ್ತು ಮಾನಸಿಕ ಒತ್ತಡವನ್ನು ನಿಭಾಯಿಸಲು ಕ್ರೀಡಾಪಟುಗಳನ್ನು ಸಜ್ಜುಗೊಳಿಸುವುದು
- ನಕಾರಾತ್ಮಕ ಚಿಂತನೆಯನ್ನು ಗುರುತಿಸಲು ಮತ್ತು ಬದಲಾಯಿಸಲು ಅರಿವಿನ ಪುನರಚನೆ
- ಸಾಧನೆಯ ಸ್ವಯಂ-ವಿಶ್ಲೇಷಣೆ ಮತ್ತು ಮಾನಸಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ತಂತ್ರಗಳಂತಹ ಕ್ಷೇತ್ರಗಳ ಕುರಿತು ಪ್ರತಿಕ್ರಿಯೆಯನ್ನು ಸಂಗ್ರಹಿಸಲು ಗುಂಪು ಕಾರ್ಯಾಗಾರಗಳನ್ನು ಆಯೋಜಿಸುವುದು.
- ಉತ್ತಮ ಸಾಂಘಿಕ ಸಾಧನೆಗೆ ಪ್ರೇರಣೆಯಾಗಬಲ್ಲ ಒಗ್ಗಟ್ಟು ಮತ್ತು ಸಂವಹನವನ್ನು ಉತ್ತೇಜಿಸಲು ತರಬೇತುದಾರರಿಗೆ ಸಲಹೆ ಮತ್ತು ಮಾರ್ಗಸೂಚಿಗಳನ್ನು ಒದಗಿಸುವುದು.
- ಕ್ರೀಡೆಯ ಮನೋವೈಜ್ಞಾನಿಕ ಬೇಡಿಕೆಗಳನ್ನು ನಿಭಾಯಿಸಲು ಮತ್ತು ಸಾಧನೆಗಳನ್ನು ಸುಧಾರಿಸಲು ಇರುವ ತೊಂದರೆಗಳನ್ನು ನಿವಾರಿಸಿಕೊಳ್ಳಲು ಕ್ರೀಡಾಪಟುಗಳಿಗೆ ತಂತ್ರಗಳನ್ನು ಒದಗಿಸುವುದು.
- ಆಯ್ಕೆಗಳ ಮತ್ತು ಕ್ರಿಯೆಗಳ ಹೊಣೆಗಾರಿಕೆಯ ಬಲವಾದ ಭಾವನೆಯನ್ನು, ನಾಯಕತ್ವ ಕೌಶಲ್ಯಗಳನ್ನು, ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನಿರ್ಮಿಸಿಕೊಳ್ಳಲು ಮಾರ್ಗದರ್ಶನವನ್ನು ನೀಡುವುದು.
- ದೈಹಿಕ ಸಾಮರ್ಥ್ಯದ ವಿಷಯದಲ್ಲಿ ಆಟಗಾರನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಪೌಷ್ಟಿಕತಜ್ಞರು ಮತ್ತು ಶರೀರಶಾಸ್ತ್ರಜ್ಞರೊಂದಿಗೆ ಸಂಯೋಜಿತ ಅವಧಿಗಳನ್ನು ನಡೆಸುವುದು.
ಬೇರೆ ರೀತಿಯಲ್ಲಿ ಹೇಳುವುದಾದರೆ, SCS ನಲ್ಲಿ, ನಾವು ನಮ್ಮ ಗ್ರಾಹಕರಿಗೆ ಅವರು ತಮ್ಮ ಅತ್ಯುತ್ತಮ ರೂಪಾಂತರವಾಗಿ ಬೆಳೆಯುವ ಅಂತಿಮ ಗುರಿಯನ್ನು ಸಾಧಿಸಲು ಕೈಗೊಂಡಿರುವ ಚೇತರಿಕೆಯ ಪ್ರಯಾಣದಲ್ಲಿನ ಹೋರಾಟಗಳನ್ನು ಜಯಿಸುವ ಪ್ರಕ್ರಿಯೆಯಲ್ಲಿ ಸಮಗ್ರವಾದ ಮಾರ್ಗವನ್ನು ನಾವು ಒದಗಿಸುತ್ತೇವೆ.
ಮನಸ್ಸಿಗೆ ತರಬೇತಿ ನೀಡುವಲ್ಲಿನ ಪ್ರಮುಖ ಹಂತವೆಂದರೆ, ಅದನ್ನೂ ಸಹ ದೇಹದಂತೆಯೇ ಅಗಾಧವಾಗಿ ಸುಧಾರಿಸಬಹುದು ಎಂಬುದನ್ನು ನಾವು ಬಲವಾಗಿ ನಂಬುತ್ತೇವೆ. ವೈಯಕ್ತಿಕ ಮತ್ತು ಸಾಮುದಾಯಿಕ ಮಟ್ಟದಲ್ಲಿ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ, ಸಂರಕ್ಷಿಸುವ ಮತ್ತು ಮರುಸ್ಥಾಪಿಸುವ ವಿಷಯ ನಿರೂಪಣೆಯನ್ನು ಹರಡುವುದರ ಪ್ರಾಮುಖ್ಯತೆ ಬಹಳ ಮುಖ್ಯವಾಗಿದೆ.
ನಾವು ನಮ್ಮ ಅಥ್ಲೀಟ್ಗಳ ಅಚಲವಾದ ಪ್ರದರ್ಶನವನ್ನು ಗಮನಿಸುವಾಗ, “ಶಕ್ತಿಯು ಕೇವಲ ದೈಹಿಕ ಸದೃಢತೆಯಲ್ಲಿಲ್ಲ, ಆದರೆ ದೌರ್ಬಲ್ಯಗಳನ್ನು ಜಯಿಸಲು ಮತ್ತು ಮುಂಬರುವ ಸವಾಲುಗಳನ್ನು ಎದುರಿಸಲು ಸಾಕಷ್ಟು ಶಕ್ತಿಯುತವಾಗಿರುವ ಮನಸ್ಸಿನಲ್ಲಿದೆ ಎಂದು ತಿಳಿದುಬರುತ್ತದೆ. ಆಗ ನಾವು ನಿಜವಾಗಿಯೂ ಉದಯಿಸುತ್ತಿರುವ ಒಬ್ಬ ಚಾಂಪಿಯನ್ ಅನ್ನು ನೋಡುತ್ತಿರುತ್ತೇವೆ.
